ಯಾವ ಕನಸಿನ ಮೋಹದಡಿಯಲಿ ಬಂದು ನಿಂತಿಹೆ ಇಲ್ಲಿಗೆ
ಯಾಕೆ ಬಂದಿಹೆ ಎತ್ತ ಹೋಗುವೆ ಒಂದೂ ತಿಳಿಯದು ಬುದ್ದಿಗೆ !!
ಎಂದೋ ಮಾಡಿದ ತಪ್ಪಿಗಾಗಿ ಇಂದು ಅನುಭವಿಸುತ್ತಿದೆ ಈ ಜೀವನ
ಬಾಲ್ಯದಾನಂದವ ನೆನೆದು ದಿನವೂ ಮರುಗುತಿದೆ ನನ್ನೀಮನ .
ಎಲ್ಲರಂತೆಯೇ ನಾನೂ ಗಳಿಸಿದೆ ಉತ್ತಮ ಗಳಿಕೆಯ ವೃತಿ
ಐ ಟಿ ಕಂಪನಿ ಗಂತು ಇತ್ತು ತುಂಬಾ ಬೇಡಿಕೆ ಜಾಸ್ತಿ
ಕರ್ಚು ಗಳಿಕೆಯು ಸಮನಾಗಿದ್ದರು ನನ್ನೋಳಗಿತ್ತು ತೃಪ್ತಿ
ತಿಂಗಳ ಕೊನೆಯಲಿ ನೋಡುತ ಲಿದ್ದರೆ ಪೆಟ್ರೋಲ್ ಕರ್ಚಿಗೂ ನಾಸ್ತಿ
ಕಳೆಯುತಥಲಿದ್ದೆ ನನ್ನೀಜೀವನ ಈ ಪರಿ ಬಹು ಸಂತೋಷದಲಿ
ಬಂದಿತು ಒಂದಿನ ಮದುವೆಯ ಪ್ರಸ್ತಾಪ ದೂರವಾಣಿಯ ರೂಪದಲಿ
ಹೊಸತನ ಹೊಸಬಗೆ ಎಲ್ಲವೂ ನೂತನ ಅದುವೇ ಕನಸಿನ ಲೋಕ
ದಿನಕಳೆದನ್ಥೆಯೇ ಆಡಿಸಲಾರಮ್ಬಿಸಿತ್ತು ಅರ್ಥಶಾಸ್ತ್ರದ ಶಾಖ
ನಾಗಾಲೋಟದಲಿ ಓಡುತಲಿತ್ತು ಬೆಂಗಳೂರೆಂಬ ಜಿಂಕೆ
ಕರಗುತಲಿತ್ತು ಆಸೆಯ ಗೋಪುರ ಮನದಲ್ಲಿತ್ತು ಶಂಕೆ
ಒಳ್ಳೆಯ ಆಶಯ ಒಳ್ಳೆಯ ಮನಸ್ಸು ಎಲ್ಲವೂ ಇಲ್ಲಿಂದ ಮಾಯ
ಹೆಚ್ಚಿಗೆ ಗಳಿಸುವದೊಂದೇ ಆಯಿತು ನಮ್ಮೆಲ್ಲರ ದ್ಯೇಯ